ADHD in Kannada (ಕನ್ನಡದಲ್ಲಿ)

ADHD in Kannada

ADHD
ADHD (ಕನ್ನಡದಲ್ಲಿ)

About ADHD in Kannada (ಕನ್ನಡದಲ್ಲಿ) – ಈ ತೊಂದರೆಯಲ್ಲಿ ಮೂರು ರೀತಿಯ ADHD ಲಕ್ಷಣಗಳು ಸೇರಿವೆ:

  1. ಗಮನ ಕೊಡಲು ಆಗದ ಅಥವಾ ಏಕಾಗ್ರತೆಯ ತೊಂದರೆ (Inattentive). ADHD (ಕನ್ನಡದಲ್ಲಿ) ಸಮಸ್ಯೆಯನ್ನು ಹೊಂದಿರುವ ಜನರು ಸುಲಭವಾಗಿ ವಿಷಯವನ್ನು ಹೊರತು ಬೇರೆಡೆ ಗಮನವನ್ನು ಹರಿಸುತ್ತಾರೆ. ಯಾವುದೇ ಒಂದು ಕಾರ್ಯದಲ್ಲಿ ಅವರು ಕೇಂದ್ರೀಕರಿಸುವಲ್ಲಿ ಕಷ್ಟ ಪಡುತ್ತಾರೆ.
  2. ಅಲ್ಪಾವಧಿ ಕಾಲಕ್ಕೆ ಸುಮ್ಮನೆ ಕುಳಿತಿರುವ ತೊಂದರೆ (Hyperactive). ADHD ಯೊಂದಿಗಿನ ಮಕ್ಕಳಿಗೆ ಒಂದೆಡೆ ಕುಳಿತುಕೊಳ್ಳಲು ಹಿಂಸೆಯಾಗುವುದು, ಚಡಪಡಿಕೆ ಮಾಡಬಹುದು, ಅಥವಾ ತಪ್ಪು ಸಮಯದಲ್ಲಿ ಕ್ಲಾಸಿನೊಳಗೆ ಓಡಾಡಬಹುದು. ಹದಿಹರೆಯದವರು ಮತ್ತು ವಯಸ್ಕರಲ್ಲಿ ಆಗಾಗ್ಗೆ ಸಮಾಧಾನರಹಿತ ಮತ್ತು ದುಃಖ ಭಾವನೆಯನ್ನು ಅನುಭವಿಸಬಹುದು. ಅವರು ಓದಲು ಅಥವಾ ಇತರ ಸ್ತಬ್ಧ ಚಟುವಟಿಕೆಗಳನ್ನು ಆನಂದಿಸಲು ಸಾಧ್ಯವಿರುವುದಿಲ್ಲ.
  3. ಆಲೋಚನೆ ಮಾಡುವ ಮೊದಲು ತಟ್ಟನೆ ಕೆಲಸ ಮಾಡುವುದು (Impulsive). ADHD ಯೊಂದಿಗಿನ ಜನರು ತುಂಬಾ ಜೋರಾಗಿ ಮಾತನಾಡಬಹುದು, ಸನ್ನಿವೇಶಕ್ಕೆ ಸರಿ ಹೊಂದದ ಗಟ್ಟಿಯಾದ ನಗು, ಅಥವಾ ಕೋಪಗೊಳ್ಳಬಹುದು. ಮಕ್ಕಳು ತಮ್ಮ ಸರದಿಗಾಗಿ ಕಾಯಲು ಅಥವಾ ಹಂಚಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದು ಇತರ ಮಕ್ಕಳೊಡನೆ ಆಡಲು ಕಷ್ಟವಾಗಿಸುತ್ತದೆ. ಹದಿಹರೆಯದವರು ಮತ್ತು ವಯಸ್ಕರು ತಮ್ಮ ಜೀವನದಲ್ಲಿ ದೀರ್ಘಾವಧಿಯ ಪ್ರಭಾವವನ್ನು ಹೊಂದಿರುವ ತ್ವರಿತ ನಿರ್ಧಾರಗಳನ್ನು ಮಾಡಬಹುದು. ಅವರು ಹೆಚ್ಚು ಹಣವನ್ನು ಖರ್ಚು ಮಾಡಬಹುದು ಅಥವಾ ಉದ್ಯೋಗಗಳನ್ನು ಬದಲಿಸಬಹುದು.

ADHD ಸಮಸ್ಯೆ in Kannada (ಕನ್ನಡದಲ್ಲಿ) – ಏಕಾಗ್ರತೆಯ ಸಮಸ್ಯೆ

ಇದು ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಸಾಮಾನ್ಯ. ಶಾಲಾ ಪರೀಕ್ಷಾ ಫಲಿತಾಂಶ ಕಡಿಮೆ ಆಗುವುದು ಇದರಿಂದಲೇ. ಈ ಸಮಸ್ಯೆಯ ಸೂಚಕಗಳನ್ನು ಶಾಲಾ ಆರಂಭದ ಸಮಯದಲ್ಲೇ ಗುರುತಿಸಿದಲ್ಲಿ ತಜ್ಞ ವೈದ್ಯರು ಇದನ್ನು ಸಂಪೂರ್ಣವಾಗಿ ಸರಿ ಪಡಿಸಬಹುದು. 

ಹೋಮ್ವರ್ಕ್ ಅಥವಾ ಇತರ ದೈನಂದಿನ ಮನೆಗೆಲಸದಂತಹ ಕಾರ್ಯಗಳನ್ನು ಪೂರ್ಣಗೊಳಿಸದಂತೆ ವಿದ್ಯಾರ್ಥಿ ಮುಂದೂಡಬಹುದು, ಅಥವಾ ಒಂದು ಅಪೂರ್ಣ ಚಟುವಟಿಕೆಯಿಂದ ಮತ್ತೊಂದಕ್ಕೆ ಸ್ಥಳಾಂತರಗೊಳ್ಳಬಹುದು.

ಇವುಗಳೊಡನೆ:

  • ಅಸ್ತವ್ಯಸ್ತವಾಗಿರುವುದು ಹಾಗು ಒಂದು ರೀತಿ ಜೋಡಿಸಿಕೊಳ್ಳದಿರುವುದು 
  • ಗಮನದ ಕೊರತೆ ಮತ್ತು ಇದರಿಂದಾಗಿ ಮತ್ತೆ ಮತ್ತೆ ಓದಿದರೂ ಗ್ರಹಿಸಲು ಮತ್ತು ಜ್ಞಾಪಕ ಶಕ್ತಿಯಲ್ಲಿಟ್ಟುಕೊಂಡು ಪರೀಕ್ಷೆಯಲ್ಲಿ ಬರೆಯಲಾಗದಿರುವುದು 
  • ವಿವರಗಳಿಗೆ ಗಮನ ಕೊಡುವುದರಲ್ಲಿ ಕಷ್ಟ ಪಡುವುದು ಮತ್ತು ಅಸಡ್ಡೆಯಿಂದ ಅಥವಾ ನಿರ್ಲಕ್ಸ್ಯದಿಂದ ಹೆಚ್ಚಾಗಿ ಸಣ್ಣ ಪುಟ್ಟ ತಪ್ಪುಗಳನ್ನು ಮಾಡುವ ಪ್ರವೃತ್ತಿ
  • ಅವರ ಕೆಲಸವು ಗೊಂದಲಮಯವಾಗಿರಬಹುದು ಮತ್ತು ಅಸಡ್ಡೆ/ಅಲಕ್ಷ್ಯ ತೋರುತ್ತದೆ.
  • ಮಾತನಾಡುವಾಗ ಆ ವಿಷಯವನ್ನು ಬಿಟ್ಟು ಇತರೆ ವಿಷಯಗಳ ಬಗ್ಗೆ ಗೊಂದಲಮಯವಾಗಿ ಮಾತನಾಡುವುದು 
  • ಸಾಮಾಜಿಕ ನಿಯಮಗಳನ್ನು ಅನುಸರಿಸಲಾಗದಿರುವುದು
  • ಅನ್ಯರು ಮಾತನಾಡುವಾಗ ಆ ವಿಷಯದ ಬಗ್ಗೆ ಗಮನ ಹರಿಸುವಲ್ಲಿ/ಉಳಿಸಿಕೊಳ್ಳುವಲ್ಲಿ ತೊಂದರೆ
  • ದೈನಂದಿನ ಚಟುವಟಿಕೆಗಳ ಬಗ್ಗೆ ಮರೆಯುವುದು (ಉದಾಹರಣೆಗೆ, ಅಪಾಯಿಂಟ್ಮೆಂಟ್ಗಳನ್ನು ಕಳೆದುಕೊಂಡಿರುವುದು, ಊಟದ ಬಾಕ್ಸ್ ತರಲು ಮರೆಯದಿರುವುದು)
  • ಸಾಮಾನ್ಯವಾಗಿ ಇತರರಿಂದ ನಿರ್ಲಕ್ಷಿಸಲ್ಪಡುವ ಕ್ಷುಲ್ಲಕ ಶಬ್ದಗಳು ಅಥವಾ ಘಟನೆಗಳಂತಹ ವಿಷಯಗಳಿಗೆ ಸುಲಭವಾಗಿ ಗಮನ ಕೊಡುವುದು 

ADHD ಸಮಸ್ಯೆಯನ್ನು ಆದಷ್ಟು ಬೇಗ ಸರಿಪಡಿಸಿದಲ್ಲಿ ಶಾಲಾ ಪರೀಕ್ಷೆಗಳಲ್ಲಿ ಉತ್ತಮ ಹಾಗು ಅತ್ಯುತ್ತಮ ಫಲಿತಾಂಶಗಳನ್ನು ಪಡೆಯಿರಿ 

ಅಪ್ಪೋಯಿಂಟ್ಮೆಂಟ್ ಗಾಗಿ ಕೂಡಲೆ 8884976550 ಸಂಪರ್ಕಿಸಿ ಸಲಹೆ ಪಡೆಯಿರಿ

Leave a Comment